ಭಾರತೀಯ ಮಠಗಳು

ಶ್ರೀಯುತ ಎಲ್ ವಿ ಪರಮಶಿವಯ್ಯನವರು ಮಾಲೀಕರು ಎಲ್ ವಿ ಟೂರ್ಸ್ ಮತ್ತು ಟ್ರಾವೆಲ್ಸ್ ಬೆಂಗಳೂರು .ಇವರ ನೇತೃತ್ವದಲ್ಲಿ, “ಭಾರತೀಯ ಮಠಗಳು ,” ಡಾಟ್ .ಕಾಮ್ ಎಂಬ ವೆಬ್ಸೈಟ್ ಅನ್ನು ಲಾಂಛನ ಗೊಳಿಸುತ್ತಿದ್ದು ,ರಾಜರ ಆಳ್ವಿಕೆಗೆ ಮೊದಲು ಸಮಾಜ ಅಭಿಮುಖವಾಗಿ ಕಾರ್ಯನಿರ್ವಹಿಸುತ್ತಿದ್ದ ಮಠಗಳು ಸಮಾಜದ ವ್ಯವಸ್ಥೆಯನ್ನು ಕಾಪಾಡುವಲ್ಲಿ ಅತ್ಯಂತ ಹೆಚ್ಚಿನ ಮಹತ್ವದ ಸ್ಥಾನವನ್ನು ಹೊಂದಿದ್ದು, ಇಂದು ಆ ಮಠಗಳ ವಿಳಾಸ ಮತ್ತು ಮಠಗಳು ಮಾಡುವ ಕಾರ್ಯಕ್ರಮಗಳು ಸಮಾಜಕ್ಕೆ ಅಂತರ್ಜಾಲದ ಮೂಲಕ ಸಿಗುವ ಪ್ರಯತ್ನವನ್ನು ಮಾಡಲು ಹೊರಟಿದ್ದಾರೆ .ನಡೆದಾಡಿದ ದೇವರ ಸ್ಥಾನವಾದ ಸಿದ್ಧಗಂಗಾ ಶ್ರೀಗಳು ಹಾಗೂ ಬೆಟ್ಟಹಳ್ಳಿ ಮಠದ ಶ್ರೀಗಳು ಈ ಕಾರ್ಯಕ್ರಮಕ್ಕೆ ತಮ್ಮ ಶುಭಾಶಯಗಳನ್ನು ಕೋರಿದ್ದಾರೆ .

ಶ್ರೀ ಯುತ ಎಲ್ ವಿ ಪರಮಶಿವಯ್ಯನವರು, ಮಾಲೀಕರು ಎಲ್ ವಿ ಟೂರ್ಸ್ ಮತ್ತು ಟ್ರಾವೆಲ್ಸ್ ಬೆಂಗಳೂರು, ಇವರ ಅಧ್ಯಕ್ಷತೆಯಲ್ಲಿ “ಭಾರತೀಯ ಮಠಗಳು”. ಎಂಬ ವೆಬ್ ಸೈಟನ್ನು ಈ ನಾಡು ಕಂಡ ಸಂತ ಶ್ರೇಷ್ಠ,ಆಧುನಿಕ ಬಸವಣ್ಣ ,ನಡೆದಾಡಿದ ದೇವರು,ತ್ರಿವಿಧ ದಾಸೋಹಿಗಳು,ಕರ್ನಾಟಕ ರತ್ನ, ಶ್ರೀ ನಿ.ಪ್ರ.ಸ್ವ. ಪರಮಪೂಜ್ಯ ಉದಾತ್ತ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಅವರ ಹುಟ್ಟುಹಬ್ಬದ ದಿನದಂದು ಸಿದ್ಧಗಂಗಾ ಮಠ ತುಮಕೂರು ನಲ್ಲಿ ಅದ್ದೂರಿಯಾಗಿ ಬಿಡುಗಡೆಗೊಳಿಸಲು ಆಯೋಜಿಸಲಾಗಿತ್ತು.ಕರೋನಾ ಎಂಬ ಮಹಾಮಾರಿಗೆ ಈ ನಾಡು ತತ್ತರಿಸಿದ್ದು, ಈ ವಿಷಮ ಪರಿಸ್ಥಿತಿಯಲ್ಲಿ ,ವೆಬ್ಸೈಟ್ ಅನ್ನು ಸರಳವಾಗಿ ಉದ್ಘಾಟನೆ ಮಾಡಲಾಗುತ್ತದೆ.