ಶರಣೆ ವೀರಮ್ಮನವರ ಮಠ – ಹೊಸಕೊಟೆ

ಶರಣೆ ವೀರಮ್ಮನವರ ಮಠ – ಹೊಸಕೊಟೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯು ಬೆಂಗಳೂರು ಮಾಹಾನಗರದಿಂದ ಕೇವಲ 25 ಕಿಮೀ. ದೂರದಲ್ಲಿರುವ ಪುರಾತನ ವೀರಶೈವ ಧಾರ್ಮಿಕ ಕ್ಷೇತ್ರವಾಗಿತ್ತು. ಈ ಪಟ್ಟಣದಲ್ಲಿ ಸುಮರು 14 ವೀರಶೈವ ಮಠಗಳು ಅಸ್ತಿತ್ವದಲ್ಲಿತ್ತೆಂದು ಹೇಳಲಾಗುತ್ತಿದ್ದು ಪ್ರಸ್ತುತ ಶರಣೆ ವೀರಮ್ಮನವರ ಮಠವು ಮಾತ್ರ ಅಸ್ತಿತ್ವ ಉಳಿಸಿಕೊಂಡು ಬಂದಿದೆ. ಪುರತಾನ ಕಾಲದಲ್ಲಿ ಶ್ರೀ ನಂದಪ್ಪದೇವರು ಎಂಬುವರು ಈ ಪ್ರದೇಶದಲ್ಲಿ ಅನುಷ್ಠಾನ ಕೈಗೊಂಡು ಭಕ್ತರನ್ನು ಧರ್ಮ ಮಾರ್ಗದಲ್ಲಿ ಕೊಂಡೊಯ್ದು ಲಿಂಗೈಕ್ಯರಾಗಿದ್ದು ಇವರ ಗದ್ದುಗೆಯ ಮೇಲೆ ಭಕ್ತರೇ ಸ್ಥಾಪಿಸಿದ ಮಠವೇ ಶರಣೆ ವೀರಮ್ಮನವರ ಮಠ.

ಶರಣೆ ಕಾತ್ಯಾಯಿನಿಯವರು
ಹೊಸಕೋಟೆ, ಬೆಂಗಳೂರು ಗ್ರಾ.ಜಿ||

ವರ್ಷದ ಕಾರ್ಯಕ್ರಮಗಳು
• ಪ್ರತಿ ಹುಣ್ಣಿಮೆ, ಅಮವಾಸೆಗಳಲ್ಲಿ ವಿಶೇಷ ಪೂಜೆ & ಕಾರ್ಯಕ್ರಮಗಳು
• ಬುದ್ಧ ಪೂರ್ಣಿಮೆಗೆ ಊರ ಜಾತ್ರೆ ಮತ್ತು ಮಠದಲ್ಲಿ ಅನ್ನಸಂತರ್ಪಣೆ ಹಾಗೂ ಕಾರ್ಯಕ್ರಮಗಳು
• ಕಾರ್ತಿಕದ 2ನೇ ಸೋಮವಾರ ಮಠದ ಅಮ್ಮನವರ “ಜಲವಿವಾದ”
• ಅಕ್ಕನ ಹುಣ್ಣಿಮೆ ಆದ 2ನೇ ದಿನಕ್ಕೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.

ವಿಳಾಸ
ಶರಣೆ ಕಾತ್ಯಾಯಿನಿಯವರು
ಶರಣೆ ವೀರಮ್ಮನವರ ಮಠ
ಗಾಣಿಗರ ಪೇಟೆ, ಹೊಸಕೊಟೆ – 562 114
ಹೊಸಕೊಟೆ ತಾ||, ಬೆಂಗಳೂರು ಗ್ರಾ. ಜಿ||