ಶ್ರೀಕ್ಷೇತ್ರ ಕಲ್ಲು ಮಠ – ದೊಡ್ಡಕೊಡ್ಲಿ

ಶ್ರೀಕ್ಷೇತ್ರ ಕಲ್ಲು ಮಠ – ದೊಡ್ಡಕೊಡ್ಲಿ
ಕೊಡ್ಲಿಪೇಟೆ ಗ್ರಾಮದಿಂದ ಸುಮಾರು 2 ಕಿ.ಮಿ ಅಂತರದಲ್ಲಿರುವ ದೊಡ್ಡಕೊಡ್ಲಿಯ ಕಾಫಿ ತೋಟದ ನಿಸರ್ಗದ ರಮಣೀಯ ಸ್ಥಳದಲ್ಲಿ ಸ್ಥಾಪಿತಗೊಂಡು ಭಕ್ತರನ್ನು ಪೊರೆಯುತ್ತಿರುವ ಸುಕ್ಷೇತ್ರವೇ ಶ್ರೀ ಕ್ಷೇತ್ರ ಕಲ್ಲು ಮಠ. ಸುಮಾರು 16 ನೇ ಶತಮಾನದಲ್ಲಿ ಸ್ಥಾಪಿತಗೊಂಡಿದ್ದಂತೆ ಕಂಡು ಬರುವ ಶ್ರೀಮಠಕ್ಕೆ ಕೊಡಗಿನ ದೊಡ್ಡ ವೀರರಾಜೇಂದ್ರ ಒಡೆಯರ್ರವರು 1806ರಲ್ಲಿ ಭೂಮಿ ದಾನ ಕೊಟ್ಟಿರುವುದು ಕಂಡು ಬರುತ್ತದೆ. ಕಳೆದ ಐದು ಶತಮಾನಗಳಿಂದ ಈ ಭಾಗದ ಪ್ರಮುಖ ಧಾರ್ಮಿಕ  ಕೇಂದ್ರವಾಗಿ ಗುರುತಿಸಿಕೊಂಡು ಬರುತ್ತಿರುವ ಶ್ರೀಮಠದ ಸ್ಥಾಪಕರು ಪರಮ ಪೂಜ್ಯ ಶ್ರೀ ಚರಮೂರ್ತಿ ಮಹಾಂತ ಮಹಾಸ್ವಾಮಿಗಳು.

ಶ್ರೀ ನಿ.ಪ್ರ.ಸ್ವ. ಚರಮೂರ್ತಿ ಮಹಂತ ಮಹಾಸ್ವಾಮಿಗಳು
ಮದೆನಾಡು ಗ್ರಾಮ, ಮಡಿಕೇರಿ ತಾ||
8ನೇ ಶ್ರೀಗಳು
ಪಟ್ಟಾಧಿಕಾರ: 22-05-1975.

ಶಿಕ್ಷಣ ಸಂಸ್ಥೆಗಳು
• ಕಿರಿಯ / ಹಿರಿಯ ಪ್ರಾಥಮಿಕ /
• ಪ್ರೌಢಶಾಲೆ
• ಸಂಸ್ಕೃತ ಶಾಲೆ
• ವಿದ್ಯಾರ್ಥಿ ನಿಲಯ.

ವರ್ಷದ ಕಾರ್ಯಕ್ರಮಗಳು
• ಪ್ರತಿ ಹುಣ್ಣಿಮೆಗೆ ಶಿವಾನುಭವ ಗೋಷ್ಠಿ
• ಬಸವಜಯಂತಿ ಆಚರಣೆ
• ಡಿಸೆಂಬರ್ ಶ್ರೀ ಹಿರಿಯ ಗುರುಗಳ & ಕರ್ತೃಗಳ ಪುಣ್ಯಾರಾಧನೆ
• ನವಂಬರ್ ತಿಂಗಳಲ್ಲಿ ಶ್ರೀ ಚೌಡಮ್ಮ ದೇವಿ ಹಬ್ಬ ಆಚರಣೆ.

ವಿಳಾಸ
ಮೊ: 9448585652 / 9844192267
ಶ್ರೀ ನಿ.ಪ್ರ.ಸ್ವ. ಚರಮೂರ್ತಿ ಮಹಂತ ಮಹಾಸ್ವಾಮಿಗಳು
ಶ್ರೀಕ್ಷೇತ್ರ ಕಲ್ಲು ಮಠ –
ದೊಡ್ಡಕೊಡ್ಲಿ, ಕೊಡ್ಲಿಪೇಟೆ ಪೋಸ್ಟ್ – 571 231
ಸೋಮವಾರಪೇಟೆ ತಾ||, ಕೊಡಗು ಜಿಲ್ಲೆ.