ಶ್ರೀಕ್ಷೇತ್ರ ತಪೋವನ – ಮನೆಹಳ್ಳಿ ಗ್ರಾಮ

ಶ್ರೀಕ್ಷೇತ್ರ ತಪೋವನ – ಮನೆಹಳ್ಳಿ ಗ್ರಾಮ
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕು ಮನೆಹಳ್ಳಿ ಗ್ರಾಮವೆಂಬ ಪುರಾತನ ಕಾಲದಲ್ಲಿದ್ದ ಗ್ರಾಮದಲ್ಲಿ ಕಳೆದ ದಶಕದಿಂದೀಚೆಗೆ ಸ್ಥಾಪಿತಗೊಂಡು ಅಸಂಖ್ಯಾತ ಭಕ್ತರನ್ನು ಪೊರೆಯುತ್ತಿರುವ ಶ್ರೀ ಕ್ಷೇತ್ರ ತಪೋವನವು ಕಡಿಮೆ ಅವಧಿಯಲ್ಲಿಯೇ ನಾಡಿನ ಗಮನ ಸೆಳೆದಿದೆ. ಸುಮಾರು 800 ವರ್ಷಗಳ ಹಿಂದೆ ಅಸ್ತಿತ್ತ್ವದಲ್ಲಿತ್ತೆಂದು ಹೇಳಲಾಗುವ ಮನೆಹಳ್ಳಿ ಗ್ರಾಮವು ಕ್ರಮೇಣ ನಾಶಗೊಂಡು ದಟ್ಟಾರಣ್ಯವಾಗಿತ್ತು. ಇತ್ತಿಚೆಗೆ 2004ರಲ್ಲಿ ಶ್ರೀ ಮ.ನಿ.ಪ್ರ. ಮಹಾಂತ ಶಿವಲಿಂಗ ಸ್ವಾಮಿಗಳು ಈ ಸ್ಥಳದಲ್ಲಿ ಮಠವನ್ನು ಸ್ಥಾಪಿಸಿದ್ದಾರೆ.

ಶ್ರೀ ಮ.ನಿ.ಪ್ರ. ಮಹಾಂತ ಶಿವಲಿಂಗ ಸ್ವಾಮಿಗಳು
ಹುಬ್ಬಳ್ಳಿ, ಧಾರವಾಡ ಜೆಲ್ಲೆ
ಪ್ರಥಮ ಶ್ರೀಗಳು
ಪಟ್ಟಾಧಿಕಾರ: 27-05-2005

ಶಿಕ್ಷಣ ಸಂಸ್ಥೆಗಳು
• ವಿದ್ಯಾರ್ಥಿ ನಿಲಯ (ಉಚಿತ).

ವರ್ಷದ ಕಾರ್ಯಕ್ರಮಗಳು
• ಪ್ರತಿ ಹುಣ್ಣಿಮೆ ಆದ ಎರಡನೇ ದಿನಕ್ಕೆ ಮಹಾಮಂಗಳಾರತಿ  ಮಹಾಪ್ರಸಾದ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು
• ಚೈತ್ರ ಮಾಸದಲ್ಲಿ ಶ್ರೀಮಠದ ಜಾತ್ರೆ, ಸಾಮೂಹಿಕ ವಿವಾಹ, ಸಾಮೂಹಿಕ ದೀಕ್ಷೆ, ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು
• ದಸರದಲ್ಲಿ ನಿತ್ಯ ಉತ್ಸವ ಕೊನೆ ದಿವಸ ವಿಜಯದಶಮಿ ಉತ್ಸವ.
• ಕಾರ್ತಿಕ ಮಾಸದಲ್ಲಿ ನಿತ್ಯ ದೀಪೋತ್ಸವ.

ವಿಳಾಸ
ಮೊ: 9480853661, 9620840219
ಶ್ರೀ ಮ.ನಿ.ಪ್ರ. ಮಹಾಂತ ಶಿವಲಿಂಗ ಸ್ವಾಮಿಗಳು
ಶ್ರೀಕ್ಷೇತ್ರ ತಪೋವನ
ಮನೆಹಳ್ಳಿ ಗ್ರಾಮ, ಅಂಕನಹಳ್ಳಿ ಪೋ. – 571 235
ಸೋಮವಾರಪೇಟೆ ತಾ||, ಕೊಡಗು ಜಿಲ್ಲೆ.