ಶ್ರೀ ಕಲ್ಲಳ್ಳಿ ಮಠ – ಕಲ್ಲಳ್ಳಿ

ಶ್ರೀ ಕಲ್ಲಳ್ಳಿ ಮಠ – ಕಲ್ಲಳ್ಳಿ
ಪುರಾಣ ಪ್ರಸಿದ್ದ ಕೊಡ್ಲಿಪೇಟೆಗೆ ಒಂದು ಕಿ.ಮಿ. ಅಂತರದಲ್ಲಿ ಕಲ್ಲಳ್ಳಿಯ ಹೊರವಲಯದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಕಲ್ಲಳ್ಳಿ ಮಠವು ಪುರಾತನ ಇತಿಹಾಸ ಹೊಂದಿದ್ದು ತನ್ನ ಆಚರಣೆಗಳ ಮೂಲಕ ಈ ಭಾಗದಲ್ಲಿ ಧರ್ಮ ಜಾಗೃತಿ ಮೂಡಿಸುತ್ತಿದೆ. ಶ್ರೀಮಠದ ಸ್ಥಾಪಿತ ಕಾಲಮಾನ ಹಾಗೂ ಗುರುಗಳ ಬಗ್ಗೆ ನಿಖರವಾದ ಮಾಹಿತಿಗಳಿಲ್ಲವಾದರೂ ಸುಮಾರು 18ನೇ ಶತಮಾನದ ಪೂರ್ವಾರ್ಧದಲ್ಲಿ ಶ್ರೀ ಮಹಾದೇವಸ್ವಾಮಿಗಳು ಇಲ್ಲಿ ನೆಲೆನಿಂತು ಮುಂದುವರೆದಿರುವುದು ತಿಳಿದುಬರುತ್ತಿದೆ. ಆದರೆ ಶ್ರೀಮಠದಲ್ಲಿಯೇ ನೆಲೆನಿಂತು ತಮ್ಮ ಜೀವನದುದ್ದಕೂ ಭಕ್ತರ ಶ್ರೇಯೋಭಿವೃದ್ದಿಗೆ ಶ್ರಮಿಸಿ ಇಲ್ಲಿಯೇ ಲಿಂಗೈಕ್ಯರಾಗಿರುವ ಶ್ರೀ ವೀರಭದ್ರ ಮಹಾಸ್ವಾಮಿಗಳನ್ನು ಶ್ರೀಮಠದ ಕರ್ತೃ ಗುರುಗಳೆಂದು ಗುರುತಿಸಬಹುದಾಗಿದೆ..

ಶ್ರೀ ಮ.ಘ.ಚ. ರುದ್ರಮುನಿ ಸ್ವಾಮಿಗಳು
ಹೊಂಬಳಗಟ್ಟಿ, ಹರಪನಹಳ್ಳಿ ತಾ||
ಪಟ್ಟಾಧಿಕಾರ: 07-02-1995.

ವರ್ಷದ ಕಾರ್ಯಕ್ರಮಗಳು
• ಮಾಘ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಮತ್ತು ಶ್ರೀ ಚೌಡೇಶ್ವರಿ  ದೇವಿ ಆರಾಧನೆ
• ಶ್ರಾವಣ ಮಾಸ ಹಾಗೂ ಕಾರ್ತಿಕ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ವಿಶೇಷ ಪೂಜೆ.

ವಿಳಾಸ
ಮೊ: 9449766852
ಶ್ರೀ ಮ.ಘ.ಚ. ರುದ್ರಮುನಿ ಸ್ವಾಮಿಗಳು
ಶ್ರೀ ಕಲ್ಲಳ್ಳಿ ಮಠ
ಕೊಡ್ಲಿಪೇಟೆ ಪೋಸ್ಟ್ – 571 231
ಸೋಮವಾರಪೇಟೆ ತಾ||, ಕೊಡಗು ಜಿಲ್ಲೆ.