ಶ್ರೀ ಖಾನಿ ಮಠ – ಸೊಣ್ಣೇನಹಳ್ಳಿ

ಶ್ರೀ ಖಾನಿ ಮಠ – ಸೊಣ್ಣೇನಹಳ್ಳಿ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕು ಕೇಂದ್ರದಿಂದ 18 ಕಿ.ಮೀ ಅಂತರದಲ್ಲಿರುವ ಸೊಣ್ಣೀನಹಳ್ಳಿ ಗ್ರಾಮದ ಹೊರವಲಯದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಖಾನಿ ಮಠವು ವಿರಕ್ತ ಸಂಪ್ರದಾಯದ ಮಠವಾಗಿದ್ದು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಚಟುವಟಿಕೆಗಳ ಮುಖೇನ ಪ್ರಚಲಿತದಲ್ಲಿದೆ ಈ ಮಠವು ಕರ್ತೃ ಗುರುಗಳ ಬಗ್ಗೆ ನಿಖರವಾದ ಮಾಹಿತಿಗಳಿಲ್ಲ ಪುರಾತನ ಕಾಲದಲ್ಲಿ ಶಿವಯೋಗಿಗಳೊಬ್ಬರು ಈ ಜಾಗದಲ್ಲಿ ಅನುಷ್ಠಾನಗೊಂಡು ಜನರನ್ನು ಹರಸಿ ಲಿಂಗೈಕ್ಯರಾಗಿದ್ದಾರೆ ಇವರ ಗದ್ದುಗೆಯನ್ನು ಇಲ್ಲಿ ಮಾಡಲಾಗಿ ಭಕ್ತರು ಅವರನ್ನು ಗದ್ದುಗೆ ಸ್ವಾಮಿಗಳು ಸೊಣ್ಣೇನಹಳ್ಳಿ ಸಂಬೋಧಿಸತೊಡಗಿದರು.

ಶ್ರೀ ಮ.ನಿ.ಪ್ರ.ಸ್ವ. ಬಸವರಾಜ ಮಹಾಸ್ವಾಮಿಗಳು
ಹುಸ್ಕೂರು, ನೆಲಮಂಗಲ ತಾ||
ಪಟ್ಟಾಧಿಕಾರ: 02-02-1990.

ಶಿಕ್ಷಣ ಸಂಸ್ಥೆಗಳು
• ಹಿರಿಯ ಪ್ರಾಥಮಿಕ / ಪ್ರೌಢಶಾಲೆ
• ವಿದ್ಯಾರ್ಥಿ ನಿಲಯ
• ವೇದ ಶಿಕ್ಷಣ

ವರ್ಷದ ಕಾರ್ಯಕ್ರಮಗಳು
• ಪ್ರತಿ ಅಮವಾಸೆಗೆ ರುದ್ರಾಭಿಷೇಕ
• ಪ್ರತಿ ಹುಣ್ಣಿಮೆಗೆ ಶ್ರೀ ಮಠದಲ್ಲಿ ಭಜನೆ
• ಕಾರ್ತಿಕ ಮಾಸದಲ್ಲಿ ಹಿರಿಯ ಗುರುಗಳ ಪುಣ್ಯಾರಾಧನೆ, ಧಾರ್ಮಿಕ ಕಾರ್ಯಕ್ರಮಗಳು
• ಶಿವರಾತ್ರಿಗೆ ಅಭಿಷೇಕ, ಜಾಗರಣೆ, ಭಜನೆ.

ವಿಳಾಸ
ಮೊ: 9449377310
ಶ್ರೀ ಮ.ನಿ.ಪ್ರ.ಸ್ವ. ಬಸವರಾಜ ಮಹಾಸ್ವಾಮಿಗಳು
ಶ್ರೀ ಖಾನಿ ಮಠಸೊಣ್ಣೇನಹಳ್ಳಿ
ದೊಡ್ಡ ಬೆಳವಂಗಲ ಹೋ|| – 561 204
ದೊಡ್ಡಬಳ್ಳಾಪುರ ತಾ||, ಬೆಂಗಳೂರು ಗ್ರಾಮಾಂತರ ಜಿ|