ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ, ನಾಯಕನಹಟ್ಟಿ

ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ, ನಾಯಕನಹಟ್ಟಿ
ಪಂಚಗಣಾಧೀಶ್ವರರಲ್ಲಿ ಒಬ್ಬರಾದ ಶ್ರೀಗುರು ತಿಪ್ಪೇರುದ್ರಸ್ವಾಮಿಗಳು ತಮ್ಮ ಸಹ ಶರಣರೊಂದಿಗೆ ಲೋಕ ಸಂಚಾರ ಕೈಗೊಂಡು ಕುಪ್ಪಿನ ಕೆರೆಯ ಶ್ರೀ ಆಂಜನೇಯನಿಗೆ ಲಿಂಗಧಾರಣೆ ಮಾಡಿ ಬಾಗಳಿಯ ಕಲ್ಲೇಶ್ವರ ದೇವಸ್ಥಾನಕ್ಕೆ ಆಗಮಿಸಿ ನಂತರ ಬೇರು ಬೇರೆಯಾಗಿ ಧರ್ಮ ಪ್ರಚಾರಕ್ಕೆ ಹೊರಡುತ್ತಾರೆ. ಹೀಗೆ ಶ್ರೀ ತಿಪ್ಪೇರುದ್ರ ಸ್ವಾಮಿಗಳು ಮತ್ತು ಶ್ರೀ ಕೆಂಪಯ್ಯಸ್ವಾಮಿಗಳು ಆಂಧ್ರದ ಕಡೆಗೆ ಪ್ರಯಾಣ ಬೆಳೆಸುತ್ತಾರೆ.

ಶ್ರೀ ಮನ್ನಿರಂಜನ ಷಟ್ಸ್ಥಲ ಅಷ್ಟಾವರ್ಣ ಮಹಾತತ್ವೋಪದೇಶಿ
ಶ್ರೀ ಗುರು ತಿಪೇರುದ್ರ ಮಹಾಸ್ವಾಮಿಗಳು.

ವರ್ಷದ ಕಾರ್ಯಕ್ರಮಗಳು
• ಪ್ರತಿ ಅಮವಾಸೆಗೆ ವಿಶೇಷ ಪೂಜೆ.
• ಮಾರ್ಗಶಿರ ಮಾಸದಲ್ಲಿ ಲಕ್ಷದಿಪೋತ್ಸವ ಹಾಗೂ ದೊಡ್ಡ ಕಾರ್ತಿಕೋತ್ಸವ
• ಫಾಲ್ಗುಣ ಮಾಸ ಚಿತ್ತಾ ನಕ್ಷತ್ರದಲ್ಲಿ ದೊಡ್ಡ ರಥೋತ್ಸವ, ಹಾಗೂ ಒಂದು ವಾರಗಳ ವಾರಗಳ ಅದ್ದೂರಿ ಜಾತ್ರೆ ಒಂದು ತಿಂಗಳ ನಂತರ ಮರುಜಾತ್ರೆಯೆಂಬ ಸಣ್ಣ ಜಾತ್ರೆ..

ವಿಳಾಸ
ಆಡಳಿತಾಧಿಕಾರಿಗಳು
ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ ಟ್ರಸ್ಟ್ (ರಿ)
ಶ್ರೀ ಪುಣ್ಯಕ್ಷೇತ್ರ ನಾಯಕನಹಟ್ಟಿ
ಚಳಕೆರೆ ತಾ||, ಚಿತ್ರದುರ್ಗ ಜಿ||