ಶ್ರೀ ಗುರು ಹಾಲಸ್ವಾಮಿ ಮಠ – ಹುಣಸಘಟ್ಟ

ಶ್ರೀ ಗುರು ಹಾಲಸ್ವಾಮಿ ಮಠ – ಹುಣಸಘಟ್ಟ
ತರೀಕೆರೆ ತಾಲ್ಲೂಕು ಕೇಂದ್ರದಿಂದ 11 ಕಿ.ಮೀ. ದೂರದಲ್ಲಿರುವ ಹುಣಸಘಟ ಗ್ರಾಮದ ಹೊರಭಾಗದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಗುರು ಹಾಲಸ್ವಾಮಿ ಮಠವು ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಬರುತ್ತಿದೆ. ಶ್ರೀಮಠದ ಮೂಲ ಮಠವು ಸಖರಾಯಪಟ್ಟಣದಲ್ಲಿದ್ದು ಪೂಜ್ಯ ಶ್ರೀ ಹಾಲುಸ್ವಾಮಿಗಳು ಸ್ಥಾಪಿಸಿದ್ದಾರೆಂದು ತಿಳಿದುಬರುತ್ತದೆ. ಶ್ರೀಮಠದ ಸ್ಥಾಪನೆಯ ಬಗ್ಗೆ ಅನೇಕ ಜಾನಪದ ಕಥೆಗಳು ಈ ಭಾಗದಲ್ಲಿ ಕೇಳಿಬರುತ್ತಿದ್ದು ಶ್ರೀಮಠದ ಸ್ಥಾಪಿತ ಕಾಲಮಾನ ಮಾತುಂಗ ರಾಜನ ಕಾಲ ಎಂದರೆ 18ನೇ ಶತಮಾನ.

ಶ್ರೀ ಷ.ಬ್ರ. ಗುರುಮೂರ್ತಿ ಶಿವಾಚಾರ್ಯ ಸ್ವಾಮಿಗಳು
ಹುಣಸಘಟ್ಟ, ತರೀಕೆರೆ ತಾ||
ಪಟ್ಟಾಧಿಕಾರ: 16-05-1990

ವರ್ಷದ ಕಾರ್ಯಕ್ರಮಗಳು
• ಪ್ರತಿ ಅಮವಾಸೆಯಂದು ವಿಶೇಷ ಪೂಜೆ
• ಯುಗಾದಿ ಪಾಡ್ಯದಂದು ಶ್ರೀ ಹಿರಯ ಗುರುಗಳ ಪುಣ್ಯಾರಾಧನೆ
• ಮೇ ತಿಂಗಳಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು
• ಕಾರ್ತಿಕ ಮಾಸದಲ್ಲಿ ದೀಪೋತ್ಸವ.

ವಿಳಾಸ
ದೂ: 08261-236618, ಮೊ: 9449205933
ಶ್ರೀ ಷ.ಬ್ರ. ಗುರುಮೂರ್ತಿ ಶಿವಾಚಾರ್ಯ ಸ್ವಾಮಿಗಳು
ಶ್ರೀ ಗುರು ಹಾಲಸ್ವಾಮಿ ಮಠ
ಹುಣಸಘಟ್ಟ – 577 228
ತರೀಕೆರೆ ತಾ||, ಚಿಕ್ಕಮಗಳೂರು ಜಿಲ್ಲೆ.