ಶ್ರೀ ಚಂದ್ರಶೇಖರ ಸ್ವಾಮಿ ಮಠ

ಶ್ರೀ ಚಂದ್ರಶೇಖರ ಸ್ವಾಮಿ ಮಠ
ಕುಷ್ಟಗಿ ತಾಲ್ಲೂಕಿನ ಮುದೇನೂರು ಗ್ರಾಮದಲ್ಲಿ ಪರಮಪೂಜ್ಯ ಶ್ರೀ ಚಂದ್ರಶೇಖರ ಸ್ವಾಮಿಗಳಿಂದ 1939ರಲ್ಲಿ ಸ್ಥಾಪನೆಯಾಗಿರುವ, ಶ್ರೀ ರಂಭಾಪುರಿ ಪೀಠದ ಶಾಖಾಮಠದಲ್ಲಿ ಬೆಳೆದುಬಂದಿರುವ ಶ್ರೀ ಚಂದ್ರಶೇಖರ ಸ್ವಾಮಿ ಮಠದಿಂದಾಗಿ ಈ ಗ್ರಾಮವು ಧಾರ್ಮಿಕ ಸಂಸ್ಕಾರವನ್ನು ಪಡೆದು ಮುನ್ನಡೆಯುತ್ತಿದೆ. ಕರ್ತೃಗುರುಗಳಾದ ಶ್ರೀ ಚಂದ್ರಶೇಖರ ಸ್ವಾಮಿಗಳು ಧಾರ್ಮಿಕ ಚಿಂತಕರಾಗಿಯೂ ಕೂಡ ಹೆಸರು ಮಾಡಿದ್ದು ಈ ಭಾಗದ ಜನರಿಗೆ ವೀರಶೈವ ಧರ್ಮದ ಆಚರಣೆಗಳ ಬಗ್ಗೆ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿ ಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ.

ಶ್ರೀ ಷ.ಬ್ರ. ಅಭಿನವ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು
ಗುಮ್ಮಗೋಳ, ಮಂಡರಗಿ
ಪಟ್ಟಾಧಿಕಾರ: 03-03-2011

ಶಿಕ್ಷಣ ಸಂಸ್ಥೆಗಳು
• ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
• ಪದವಿ ಪೂರ್ವ / ಪದವಿ ಕಾಲೇಜ್
• ವಿದ್ಯಾರ್ಥಿ ನಿಲಯ.

ವರ್ಷದ ಕಾರ್ಯಕ್ರಮಗಳು
• ಪ್ರತಿ ನಿತ್ಯ ರುದ್ರಾಭಿಷೇಕ
• ಫಾಲ್ಗುಣ ಮಾಸದಲ್ಲಿ ಶ್ರೀಮಠದ ಜಾತ್ರಾ ಮಹೋತ್ಸವ.
• ಜೇಷ್ಠ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.

ವಿಳಾಸ
ಮೊ: 9902724217
ಶ್ರೀ ಷ.ಬ್ರ. ಅಭಿನವ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು
ಶ್ರೀ ಚಂದ್ರಶೇಖರ ಸ್ವಾಮಿ ಮಠ
ಮುದೇನೂರು – 584 112
ಕುಷ್ಟಗಿ ತಾ|| ಕೊಪ್ಪಳ ಜಿಲ್ಲೆ.