ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ

ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ
ಕರ್ನಾಟಕದ ಧಾರ್ಮಿಕ ಇತಿಹಾಸದಲ್ಲಿ ಒಂದು ಉಜ್ವಲ ಹೆಸರು ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ್ದು, ಮೂರು ಶತಮಾನಗಳಿಗೂ ಹೆಚ್ಚಿನ ಗಣ್ಯ ಪರಂಪರೆಯನ್ನು ಹೊಂದಿ ಸಾಗಿಬಂದಿರುವ ಬೃಹನ್ಮಠವು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಗಣನೀಯ ಸೇವೆ ಸಲ್ಲಿಸಿದೆ. ಶ್ರೀಮಠದ ಇತಿಹಾಸ ವಿಸ್ತಾರವಾದದ್ದು, ಹನ್ನೆರಡನೇ ಶತಮಾನದ ಶರಣರಾದ ಶ್ರೀ ಅಲ್ಲಮಪ್ರಭು, ಶ್ರೀ ಗಾರ್ಜುನ ಮುರುಘರಾಡಿದ ಬಚನ್ನಬಸವಣ್ಣನವರಿಂದ ಪ್ರಾರಂಭಗೊಂಡು ತರುವಾಯ ಸಾಗಿಬಂದ “ಶೂನ್ಯಪೀಠ” ರ್ಎಕ್ರಮಗಳು. ಪರಂಪರೆಯ ಶೂನ್ಯ ತತ್ವದ ಮಾರ್ಗವನ್ನು ಜಗತ್ತಿಗೆ ಪಸರಿಸಿದ ಕೀರ್ತಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ್ದು.

ಶ್ರೀ ಶಿವಮೂರ್ತಿ ಮುರುಘಾ ಶರಣರು
20ನೇ ಶ್ರೀಗಳು
ಪಟ್ಟಾಧಿಕಾರ: 1991

ಶಿಕ್ಷಣ ಸಂಸ್ಥೆಗಳು
• ಎಸ್.ಜಿ.ಎಂ ವಿದ್ಯಾಪೀಠ
• ಬಸವತತ್ವ ಮಹಾವಿದ್ಯಾಲು / ಎಸ್.ಜಿ.ಎಂ.ವಚನ ಕಮ್ಮಟ
• ಎಸ್.ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯ
• ಎಸ್.ಜಿ.ಎಂ. ಪಾಲಿಟೆಕ್ನಿಕ್ ಕಾಲೇಜು
• ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ
• ಎಸ್.ಜಿ.ಎಂ ದಂತ ವೈದ್ಯಕೀಯ ಮಹಾವಿದ್ಯಾಲಯ
• ಸಂಸ್ಕೃತ ವೇದ ಪಾಠಶಾಲೆ / ಸಂಗೀತ ಪಾಠಶಾಲೆ
• ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆಗಳು.
• ಪದವಿ ಪೂರ್ವ / ಪದವಿ ಕಾಲೇಜುಗಳು
• ಸ್ನಾತಕೋತ್ತರ ಪದವಿ ಕಾಲೇಜು
• ಎಸ್.ಜಿ.ಎಂ ಫಾರ್ಮಸಿ ಕಾಲೇಜು / ಎಸ್.ಜಿ.ಎಂ. ನರ್ಸಿಂಗ್ ಕಾಲೇಜು
• ಎಸ್.ಜಿ.ಎಂ ಕಾನೂನು ಕಾಲೇಜು / ಎಸ್.ಜಿ.ಎಂ. ಚಿತ್ರಕಲಾಕಾಲೇಜು
• ವಿದ್ಯಾರ್ಥಿ / ವಿದ್ಯಾರ್ಥಿನಿಯರ ನಿಲಯಗಳು.

ವರ್ಷದ ಕಾರ್ಯಕ್ರಮಗಳು
• ಪ್ರತಿ ತಿಂಗಳು 5ನೇ ತಾರೀಖಿನಿಂದು ಸಾಮೂಹಿಕ ವಿವಾಹಗಳು ಜರುಗುತ್ತವೆ.
• ವಿಜೃಂಭಣೆಯ ಬಸವಜಯಂತಿ ಆಚರಣೆ
• ಮೇ ತಿಂಗಳಲ್ಲಿ ಶ್ರೀ ಜಗದ್ಗುರು ಜಯವಿಭವ ಮುರುಘರಾಜೇಂದ್ರ ಸ್ವಾಮಿಗಳ ಸ್ಮರಣೋತ್ಸವ.
• ಜುಲೈನಲ್ಲಿ ದಾವಣಗೆರೆಯಲ್ಲಿ ಶ್ರೀ ಜ|| ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ಸ್ಮರಣೋತ್ಸವ.
• ದಸರಾದಲ್ಲಿ 10 ದಿನಗಳ ಕಾಲ “ಶರಣ ಸಂಶ್ಕೃತಿ ಉತ್ಸವ”
• ಎರಡನೇ ದಿನ ಶ್ರೀ ಬೃಹನ್ಮಠದಲ್ಲಿ ಶ್ರೀ ಮುರುಘಾ ಶರಣರ ಶೂನ್ಯಪೀಠಾರೋಹಣ
• ಮೂರನೇ ದಿನ ಹೊಳಲ್ಕೆರೆ ಶ್ರೀ ಒಂಟಿಕಂಬ ಮಠದಲ್ಲಿ ಶ್ರೀ ಜ|| ಮಲ್ಲಿಕಾರ್ಜುನ ಮುರುಘರಾಜೇಂದ್ರ
• ಸ್ವಾಮಿಗಳ ಸರಣೋತ್ಸವ ಹಾಗೂ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು.

ವಿಳಾಸ
ದೂ: 08194-225164 / 222250
ಶ್ರೀ ಶಿವಮೂರ್ತಿ ಮುರುಘಾ ಶರಣರು
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ
ಚಿತ್ರದುರ್ಗ – 577 501
ಚಿತ್ರದುರ್ಗ ತಾ||, ಜಿ||.