ಶ್ರೀ ಜಗದ್ಗುರು ರಂಭಾಪುರಿ ಪೀಠ – ಬಾಳೆಹೊನ್ನೂರು

ಶ್ರೀ ಜಗದ್ಗುರು ರಂಭಾಪುರಿ ಪೀಠ – ಬಾಳೆಹೊನ್ನೂರು
ಬಾಳೆಹೊನ್ನೂರು ನರಸಿಂಹರಾಜಪುರ ತಾಲ್ಲೂಕಿನ ಬಾಳೆಹೊನ್ನೂರು ಪಟ್ಟಣವು ಮಲೆನಾಡಿನ ಹಸಿರಿನ ಮಧ್ಯೆ ಭದ್ರಾನದಿ ದಡದಲ್ಲಿ ಹರಡಿಕೊಂಡಿದೆ. ಈ ಪಟ್ಟಣದ ಉತ್ತರ ಭಾಗದಲ್ಲಿ ವೀರಶೈವ ಧರ್ಮದವರ ಪ್ರಮುಖ ಧಾರ್ಮಿಕ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಶ್ರೀಮದ್ ಜಗದ್ಗುರು ಶ್ರೀ ರಂಭಾಪುರಿ ಪೀಠವು ಸ್ಥಾಪನೆಯಾಗಿದ್ದು ಚಿಕ್ಕಮಗಳೂರು ಜಿಲ್ಲೆಗೆ ಖ್ಯಾತಿ ತಂದುಕೊಟ್ಟಿದೆ. ಶ್ರೀಮಠವು ಅತಿ ಪ್ರಾಚೀನ ಕಾಲದ ಇತಿಹಾಸವನ್ನು ಹೊಂದಿದ್ದು ದೇಶದ ನಾನಾ ಭಾಗಗಳಲ್ಲಿ ನೂರಾರು ಶಾಖಾ ಮಠಗಳನ್ನು ಹೊಂದಿದೆ.

ಶ್ರೀ ಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008
ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ
ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು
ಹಳಿಯಾಳ, ಹುಬ್ಬಳ್ಳಿ ತಾ||
ಪಟ್ಟಾಧಿಕಾರ: 6-2-1992

ಶಿಕ್ಷಣ ಸಂಸ್ಥೆಗಳು
• ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ರಂಭಾಪುರಿ ಪೀಠ
• ಸಂಸ್ಕೃತ ಮಹಾ ವಿದ್ಯಾಲಯ
• ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆಗಳು
• ಪದವಿ ಪೂರ್ವ / ಪದವಿ ಕಾಲೇಜ್
• ಐ.ಟಿ.ಐ. ಕಾಲೇಜ್
• ವಿದ್ಯಾರ್ಥಿ ನಿಲಯ
• ಗೋಶಾಲೆ.

ವರ್ಷದ ಕಾರ್ಯಕ್ರಮಗಳು
• ಪ್ರತಿ ಹುಣ್ಣಿಮೆಗೆ ಧಾರ್ಮಿಕ ಕಾರ್ಯಕ್ರಮಗಳು, ಗುರುಗಳ ದರ್ಶನ, ಧರ್ಮಸಭೆ
• ಫಾಲ್ಗುಣ ಶುದ್ಧ ತ್ರಯೋದಶಿಗೆ ಶ್ರೀ ರೇಣುಕಾಚಾರ್ಯ ಜಯಂತಿ ಮತ್ತು ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ರಥೋತ್ಸವ ಹಾಗೂ ದೀಕ್ಷೆ ಅಯ್ಯಚಾರ, ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು
• ಶ್ರಾವಣ ಮಾಸದಲ್ಲಿ ಒಂದು ತಿಂಗಳು ವಿಶೇಷ ಪೂಜೆ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ, ತಪೋನುಷ್ಠಾನ ಮತ್ತು ಪುರಾಣ ಪ್ರವಚನ
• ದಸರಾ ಕಾರ್ಯಕ್ರಮ, ಜಗದ್ಗುರುಗಳ ದಸರಾ ದರ್ಬಾರ್ (ನಾಡಿನ ನಾನಾ ಭಾಗಗಳಲ್ಲಿ)
• ಕಾರ್ತಿಕ ಮಾಸದ ಶುದ್ಧ ಪೌರ್ಣಮಿಯಂದು ರಥೋತ್ಸವ ಹಾಗೂ ಲಕ್ಷದೀಪೋತ್ಸವ
• ಚೈತ್ರ ಪಾಡ್ಯಕ್ಕೆ ಸ್ವಾಮಿ ಪಲ್ಲಕ್ಕಿ ಉತ್ಸವ
• ಮಹಾಶಿವರಾತ್ರಿಗೆ ರುದ್ರಾಭಿಷೇಕ, ಭಜನೆ, ಜಾಗರಣೆ.

ವಿಳಾಸ
ದೂ: 08266-250424, ಮೊ: 9448352219
ಶ್ರೀ ಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008
ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು
ಶ್ರೀ ಜಗದ್ಗುರು ರಂಭಾಪುರಿ ಪೀಠ
ಬಾಳೆಹೊನ್ನೂರು – 577 112
ನರಸಿಂಹರಾಜಪುರ ತಾ||, ಚಿಕ್ಕಮಗಳೂರು ಜಿಲ್ಲೆ.