ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ

ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ಗ್ರಾಮವು ಇದು ನಾಡಿನಾದ್ಯಂತ ಪ್ರಮುಖ ಧಾರ್ಮಿಕ ಸ್ಥಳಗಳಲ್ಲೊಂದಾಗಿ ಗುರುತಿಸಲ್ಪಡುತ್ತಿದೆ ಎಂದರೆ ಅದಕ್ಕೆ ಕಾರಣ ಇಲ್ಲಿ ಸ್ಥಾಪಿತಗೊಂಡಿರುವ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ. ಇಂದು ಸಿರಿಗೆರೆಯ ಬೃಹನ್ಮಠವು ವಿಖ್ಯಾತಗೊಂಡು ದೇಶವಿದೇಶದ ಜನ ಭಾರತೀಯ ಭೂಪಟದಲ್ಲಿ ಗುರುತಿಸು ವಂತಾಗಿದ್ದು ಶ್ರೀ ಬೃಹನ್ಮಠವು ಧಾರ್ಮಿಕ ಕ್ಷೇತ್ರದ ಜೊತೆಗೆ ಶೈಕ್ಷಣಿಕ, ಸಾಮಾಜಿಕ, ವೈಜ್ಞಾನಿಕ, ಸಾಹಿತ್ಯಕ ಹಾಗೂ ಸಾಂಸ್ಕೃತಿಕವಾಗಿ ಅಭಿವೃದ್ಧಿಯನ್ನು ಕಂಡಿದೆ.


ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಶ್ರೀ 1108
ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು
ಸೂಗೂರು, ಶಿವಮೊಗ್ಗ ತಾ||
21ನೇ ಶ್ರೀಗಳು
ಪಟ್ಟಾಧಿಕಾರ: 11-2-1979

ಶಿಕ್ಷಣ ಸಂಸ್ಥೆಗಳು
• ತರಳಬಾಳು ಜಗದ್ಗುರು ವಿದ್ಯಾಪೀಠ
• ತಾಂತ್ರಿಕ ಮಹಾವಿದ್ಯಾಲಯ / ಪಾಲಿಟೆಕ್ನಿಕ್ ಕಾಲೇಜು
• ವೈದ್ಯಕೀಯ ಮಹಾವಿದ್ಯಾಲಯ /
• ಫಾರ್ಮಸಿ ಕಾಲೇಜು / ನರ್ಸಿಂಗ್ ಕಾಲೇಜು
• ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
• ಪದವಿ ಪೂರ್ವ / ಪದವಿ ಕಾಲೇಜ್
• ಸ್ನಾತಕೋತ್ತರ ಪದವಿ ಕಾಲೇಜು
• ವಿದ್ಯಾರ್ಥಿ / ವಿದ್ಯಾರ್ಥಿನಿಯರ ನಿಲಯ.

ವರ್ಷದ ಕಾರ್ಯಕ್ರಮಗಳು
●ಪ್ರತಿ ಸೋಮವಾರ ಸದ್ಧರ್ಮ ನ್ಯಾಯಪೀಠ ಜರುಗುತ್ತದೆ.
●ಜನವರಿಯಲ್ಲಿ ಶ್ರೀ ಸಿದ್ದರಾಮ ಜಯಂತಿ
●ಮಾಘ ಶುದ್ಧ ಹುಣ್ಣಿಮೆಯಂದು ‘ತರಳಬಾಳು ಹುಣ್ಣಿಮೆ” – ಧಾರ್ಮಿಕ ಹಾಗೂ ಸಾಂಸ್ಕೃತಿಕ ಜಾತ್ರೆ.
●ಫೆಬ್ರವರಿಯಲ್ಲಿ ಚರಪಟ್ಟಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳವರ ಶ್ರದ್ದಾಂಜಲಿ.
●ಶಿವರಾತ್ರಿಯಂದು “ಸರ್ವಶರಣರ ದಿನ’
●ಶ್ರೀ ರೇವಣಸಿದ್ದ ಜಯಂತಿ ಹಾಗೂ ಶ್ರೀ ಅಲ್ಲಮಪ್ರಭು ಜಯಂತಿ ಆಚರಣೆ.
●ದವನದ ಹುಣ್ಣಿಮೆಯಂದು ಅಕ್ಕಮಹಾದೇವಿ ಜಯಂತಿ
●ಏಪ್ರಿಲ್ನಲ್ಲಿ ಶ್ರೀ ಕಾಶಿ ಮಹಾಲಿಂಗ ಸ್ವಾಮಿಗಳವರ ಶ್ರದ್ದಾಂಜಲಿ
●ಬಸವಜಯಂತಿ ಆಚರಣೆ
●ಉಜ್ಜಯಿನಿ ಶ್ರೀ ಮರುಳಸಿದ್ದೇಶ್ವರ ರಥ
●ಆಗಸ್ಟ್ನಲ್ಲಿ 19ನೇ ತರಳಬಾಳು ಜಗದ್ಗುರು ಲಿಂ. ಶ್ರೀ ಗುರುರಾಜ ದೇಶಿಕೇಂದ್ರ ಮಹಾಸ್ವಾಮಿಗಳ ಶ್ರದ್ಧಾಂಜಲಿ
● ಸೆಪ್ಟೆಂಬರ್ನಲ್ಲಿ 20ನೇ ತರಳಬಾಳು ಜಗದ್ಗುರು ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಶ್ರದ್ದಾಂಜಲಿ
●ಅಕ್ಟೋಬರ್ನಲ್ಲಿ ಹರಳಯ್ಯ ಮದುವಯ್ಯಗಳ ಮಹಾನವಮಿ
●ನವೆಂಬರ್ ತಿಂಗಳಲ್ಲಿ ಶಿವನಪಾದ ಶ್ರೀ ಶಿವಾನಂದ ಸ್ವಾಮಿಗಳವರ ಶ್ರದ್ದಾಂಜಲಿ, ಶ್ರೀ ಚನ್ನಬಸವ ಜಯಂತಿ
●ಕಾರ್ತೀಕದಲ್ಲಿ ಯಲಹಂಕದಲ್ಲಿ ಶ್ರೀ ವೀರಭದ್ರೇಶ್ವರ ಕಾರ್ತೀಕ
●ಡಿಸೆಂಬರ್ನಲ್ಲಿ ಮಾದಾರ ಚನ್ನಯ್ಯ ಹಾಗೂ ತರಳಬಾಳು ಸಿದ್ದೇಶ್ವರ ಜಯಂತಿ.
●ಪ್ರತಿ ಸೋಮವಾರ ಸದ್ಧರ್ಮ ನ್ಯಾಯಪೀಠ ಜರುಗುತ್ತದೆ.

ವಿಳಾಸ
ದೂ: 08194-268829 / 268848
ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ
ಸಿರಿಗೆರೆ – 577 541
ಚಿತ್ರದುರ್ಗ ತಾ||, ಜಿ||.