ಶ್ರೀ ನಿಜಗುಣರ ಜಂಗಮ ಮಠ – ಬೆಂಗಳೂರು

ಶ್ರೀ ನಿಜಗುಣರ ಜಂಗಮ ಮಠ – ಬೆಂಗಳೂರು
ಬೆಂಗಳೂರು ನಗರದ ಮಧ್ಯಭಾಗದ ಗವಿಪುರಂ ಬಡಾವಣೆಯಲ್ಲಿ ಅಸ್ತಿತ್ವದಲ್ಲಿರುವ ಶ್ರೀ ನಿಜಗುಣರ ಜಂಗಮ ಮಠವು ಕಳೆದೊಂದು ಶತಮಾನದಲ್ಲಿ ಬೆಳೆದು ಬಂದ ರೀತಿ ಅನನ್ಯ ಇದಕ್ಕೆಲ್ಲ ಕಾರಣರಾದವರು ಪರಮ ಪೂಜ್ಯ ಶ್ರೀ ಮ.ನಿ.ಪ್ರ ನಿಜಗುಣ ಮಹಾಸ್ವಾಮಿಗಳು. ಕಾಯಕಯೋಗಿಗಳು, ಮಾತೃಹೃದಯಿಗಳು, ನ್ಯಾಯನಿಷ್ಟುರಿ, ದಾಕ್ಷಿಣ್ಯಪರರಲ್ಲದ ಸರಳ ನೇರ ವೈಚಾರಿಕ ನಡವಳಿಕೆಯವರು ಆಗಿದ್ದ ಶ್ರೀ ಮ,ನಿ,ಪ್ರ ನಿಜಗುಣ ಮಹಾಸ್ವಾಮಿಗಳ ಕಾಯಕ ತತ್ವದಿಂದಾಗಿ ಪ್ರಸಿದ್ದಿಗೊಂಡ ಶ್ರೀ ಮಠವು ಶ್ರೀ ನಿಜಗುಣರ ಜಂಗಮ ಮಠವೆಂದೇ ಹೆಸರಾಗಿದೆ.

ಪರಮ ಪೂಜ್ಯ
ಲಿಂ. ಶ್ರೀ ಮ.ನಿ.ಪ್ರ ನಿಜಗುಣ ಮಹಾಸ್ವಾಮಿಗಳು.

ವರ್ಷದ ಕಾರ್ಯಕ್ರಮಗಳು
• ಪ್ರತಿ ಹುಣ್ಣಿಮೆ, ಅಮವಾಸೆಗೆ ವಿಶೇಷ ಪೂಜೆ
• ಸೆಪ್ಟೆಂಬರ್ ತಿಂಗಳಲ್ಲಿ ಕರ್ತೃ ಶ್ರೀ ಮ.ನಿ.ಪ್ರ ನಿಜಗುಣ ಮಹಾಸ್ವಾಮಿಗಳ ಪುಣ್ಯಾರಾಧನೆ.

ವಿಳಾಸ
ದೂ: 080-26603471
ಶ್ರೀ ಮ,ನಿ,ಪ್ರ ಇಮ್ಮಡಿ ನಿಜಗುಣ ಮಹಾಸ್ವಾಮಿಗಳು
ಶ್ರೀ ನಿಜಗುಣರ ಜಂಗಮ ಮಠ
ಶ್ರೀ ನಿಜಗುಣ ರೋಡ್ , ಗವಿಪುರಂ ಬಡಾವಣೆ,
ಬೆಂಗಳೂರು – 560019.