ಶ್ರೀ ಬಣ್ಣದ ಮಠ (ಚೌಕಿಮಠ) – ಶಿರಸಿ

ಶ್ರೀ ಬಣ್ಣದ ಮಠ (ಚೌಕಿಮಠ) – ಶಿರಸಿ
ಶಿರಸಿ ಪಟ್ಟಣದ ಹೃದಯ ಭಾಗದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಬಣ್ಣದ ಮರ ಅಥವಾ ಚೌಕಿ ಮಠವು ಸುಮಾರು ಮುನ್ನೂರು ವರ್ಷಗಳ ಇತಿಹಾಸವನ್ನು ಹೊಂದಿದ್ದು ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಈ ಮಠವು ಮೊದಲು ಊರ ಹೊರಭಾಗದಲ್ಲಿತ್ತು. ಆಗ ಶ್ರೀಮಠಕ್ಕೆ ಶ್ರೀ ಚೌಕಿಮಠವೆಂದು ಕರೆಯುತ್ತಿದ್ದರು. ಮುಂದೆ ಊರ ಹೊರಗಿನ ಮರ ಜೀರ್ಣಾವಸ್ಥೆ ತಲುಪಿದಾಗ ಗ್ರಾಮದ ಉಣ್ಣೆ ಮನೆತನದವರು ಮಠವನ್ನು ಊರ ಒಳಗೆ ಸ್ಥಳಾಂತರಿಸಿದರು. ಈ ಕಾರಣಕ್ಕೆ ಊರ ಮಧ್ಯಭಾಗದಲ್ಲಿನ ಮಠಕ್ಕೆ “ಉಣ್ಣೆ ಮಠ”ವೆಂದು ಹೆಸರು.

ಶ್ರೀ ಮ.ನಿ.ಪ್ರ. ಶಿವಲಿಂಗ ಮಹಾಸ್ವಾಮಿಗಳು
ಸಾಸನೂರು, ಬಸವನಬಾಗೇವಾಡಿ ತಾ||
5ನೇ ಶ್ರೀಗಳು

ವರ್ಷದ ಕಾರ್ಯಕ್ರಮಗಳು
• ಕಾರ್ತಿಕ ಮಾಸದಲ್ಲಿ ಒಂದು ವಾರ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ
• ಶಿವರಾತ್ರಿಯಲ್ಲಿ ಸಾಮೂಹಿಕ ಲಿಂಗ ಪೂಜೆ
• ಬಸವ ಜಯಂತಿಯಲ್ಲಿ ಮೆರವಣಿಗೆ
• ಯುಗಾದಿಯಲ್ಲಿ ವಿಶೇಷ ಕಾರ್ಯಕ್ರಮಗಳು
• ಶ್ರಾವಣ ಮಾಸದಲ್ಲಿ ವಿಶೇಷ ಕಾರ್ಯಕ್ರಮಗಳು.

ವಿಳಾಸ
ದೂ: 08384-225505, ಮೊ: 8277647799
ಶ್ರೀ ಮ.ನಿ.ಪ್ರ. ಶಿವಲಿಂಗ ಮಹಾಸ್ವಾಮಿಗಳು
ಶ್ರೀ ಬಣ್ಣದ ಮಠ (ಚೌಕಿಮಠ)
ಜೋ ಸರ್ಕಲ್, ಶಿರಸಿ – 581404
ಶಿರಸಿ ತಾ||, ಉತ್ತರಕನ್ನಡ ಜಿ||