ಶ್ರೀ ಬಸವ ಮಂದಿರ ವಿರಕ್ತಮಠ – ಚಿಕ್ಕಮಗಳೂರು

ಶ್ರೀ ಬಸವ ಮಂದಿರ ವಿರಕ್ತಮಠ – ಚಿಕ್ಕಮಗಳೂರು
ಚಿಕ್ಕಮಗಳೂರು ನಗರದ ಕಲ್ಯಾಣನಗರ ಬಡಾವಣೆಯಲ್ಲಿ ಸ್ಥಾಪಿತಗೊಂಡಿರುವ ಶ್ರೀ | ಬಸವಮಂದಿರ ವಿರಕ್ತಮಠವು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಚಟುವಟಿಕೆಗಳ ಮೂಲಕ ಈ ಭಾಗದ ಜನರಲ್ಲಿ ಸಾಮಾಜಿಕ ಅರಿವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಈ ಮಠವು ಬಸವತತ್ವ ಪ್ರಚಾರವನ್ನು ಮೂಲ ಉದ್ದೇಶವನ್ನಾಗಿಸಿಕೊಂಡು ಸ್ಥಾಪನೆಯಾಗಿದ್ದು ಶ್ರೀ ಮಠದ ಸ್ಥಾಪಕರು ಶ್ರೀ ಮ.ನಿ.ಪ್ರ, ಜಯಚಂದ್ರಶೇಖರ ಮಹಾಸ್ವಾಮಿಗಳು.

ಶ್ರೀ ಮ.ನಿ.ಪ್ರ. ಜಯಬಸವಾನಂದ ಸ್ವಾಮಿಗಳು
ಲಕ್ಷ್ಮೀಪುರ, ಚಕ್ಕಮಗಳೂರು ತಾ||
2ನೇ ಶ್ರೀಗಳು
ಪಟ್ಟಾಧಿಕಾರ: 29-11-1995

ಶಿಕ್ಷಣ ಸಂಸ್ಥೆಗಳು
• ಶ್ರೀ ಜಯಚಂದ್ರಶೇಖರ ವಿದ್ಯಾಸಂಸ್ಥೆ (ರಿ)
• ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
• ವಿದ್ಯಾರ್ಥಿ ನಿಲಯ.

ವರ್ಷದ ಕಾರ್ಯಕ್ರಮಗಳು
• ಪ್ರತಿ ಭಾನುವಾರ “ಮಹಾಮನೆ” ಕಾರ್ಯಕ್ರಮ
• ಪ್ರತಿ ತಿಂಗಳ 2ನೇ ಶನಿವಾರ “ಶಿವಾನುಭವಗೋಷ್ಠಿ”
• ಬಸವ ಜಯಂತಿ ಆಚರಣೆ ಮತ್ತು ಬಸವಾದಿ ಪ್ರಥಮರ ಜಯಂತಿಗಳ ಆಚರಣೆ
• ಶ್ರಾವಣ ಮಾಸದಲ್ಲಿ ನಿತ್ಯ ಸಂಜೆ “ಶಿವಾನುಭವ ಗೋಷ್ಠಿ”
• ಕಾರ್ತಿಕ ಮಾಸದಲ್ಲಿ ಪ್ರತಿ ಸೋಮವಾರ “ಅರಿವಿನ ಜಾಗೃತಿ” ಕಾರ್ಯಕ್ರಮ
• ಫೆಬ್ರವರಿ ತಿಂಗಳಲ್ಲಿ ಹಿಂದಿನ ಹಿರಿಯ ಗುರುಗಳ ಪುಣ್ಯ ಸ್ಮರಣೋತ್ಸವ.

ವಿಳಾಸ
ದೂ: 08262-220499, ಮೊ: 9448157125
ಶ್ರೀ ಮ.ನಿ.ಪ್ರ. ಜಯಬಸವಾನಂದ ಸ್ವಾಮಿಗಳು
ಶ್ರೀ ಬಸವ ಮಂದಿರ ವಿರಕ್ತಮಠ
ಕಲ್ಯಾಣನಗರ, ಜೋತಿನಗರ ಪೋಸ್ಟ್
ಚಿಕ್ಕಮಗಳೂರು – 57 7102