ಶ್ರೀ ರುದ್ರದೇವರ ಮಠ – ಶಿರಸಿ (ಬಸವ ಕೇಂದ್ರ)

ಶ್ರೀ ರುದ್ರದೇವರ ಮಠ – ಶಿರಸಿ (ಬಸವ ಕೇಂದ್ರ)
ಶಿರಸಿ ಪಟ್ಟಣದ ಮಧ್ಯಭಾಗದ ಸಿಂಪಿಗಲ್ಲಿ ಪ್ರದೇಶದಲ್ಲಿ ಈಗ್ಗೆ ಸುಮಾರು ಮೂರುನೂರು ವರ್ಷಗಳ ಹಿಂದೆ ಪ್ರಾರಂಭವಾಗಿರುವ ಶ್ರೀ ರುದ್ರದೇವರ ಮಠವು ಚಿತ್ರದುರ್ಗದ ಶ್ರೀ ಮುರುಘಾ ಬೃಹನ್ಮಠದ ಶಾಖಾಮಠವಾಗಿ ಬೆಳೆದು ಬಂದಿದೆ, ಪೂಜ್ಯ ಶ್ರೀ ರುದ್ರದೇವರು ಮಹಾಸ್ವಾಮಿಗಳು ಸಂಚಾರದಲ್ಲಿದ್ದಾಗ ಭಕ್ತರ ಅಪೇಕ್ಷೆ ಮೇರೆಗೆ ಇಲ್ಲಿ ನೆಲೆಸಿ ಶ್ರೀಮಠವನ್ನು ಸ್ಥಾಪಿಸಿದ್ದರಿಂದ ಶ್ರೀ ರುದ್ರದೇವರ ಮಠ ಎಂಬ ಹೆಸರು ಬಂದಿದೆ. ಶ್ರೀಮಠವು ಪ್ರಸ್ತುತ ಚಿತ್ರದುರ್ಗ ಬೃಹನ್ಮಠದ “ಬಸವ ಕೇಂದ್ರ” ವಾಗಿಯೂ ಕಾರ್ಯ ನಿರ್ವಹಿಸುತ್ತಿದೆ.

ಶ್ರೀ ಮ.ನಿ.ಪ್ರ. ಮಲ್ಲಿಕಾರ್ಜುನ ಸ್ವಾಮಿಗಳು
ಸೀಬಾರ, ಚಿತ್ರದುರ್ಗ ತಾ||
5ನೇ ಶ್ರೀಗಳು
ಪಟ್ಟಾಧಿಕಾರ: ಚರಮೂರ್ತಿಗಳ ನೇಮಕ: 10-08-2010

ವರ್ಷದ ಕಾರ್ಯಕ್ರಮಗಳು
• ಪ್ರತಿ ತಿಂಗಳ ಕೊನೆಯ ಭಾನುವಾರ “ಶರಣ ಸಂಗಮ” ಕಾರ್ಯಕ್ರಮ ಜರುಗುವುದು
• ಶಿವರಾತ್ರಿ, ಬಸವಜಯಂತಿ, ನಾಗರ ಪಂಚಮಿಯಂದು ವಿಶೇಷ ಕಾರ್ಯಕ್ರಮಗಳು.

ವಿಳಾಸ
ಮೊ: 9740231000/9449051765
ಶ್ರೀ ಮ.ನಿ.ಪ್ರ. ಮಲ್ಲಿಕಾರ್ಜುನ ಸ್ವಾಮಿಗಳು
ಶ್ರೀ ರುದ್ರದೇವರ ಮಠ
ಸಿಂಪಿಗಲ್ಲಿ, ಶಿರಸಿ – 581401
ಶಿರಸಿ ತಾ||, ಉತ್ತರಕನ್ನಡ ಜಿ||