ಶ್ರೀ ಸರ್ಪಭೂಷಣ ಶಿವಯೋಗಿಗಳ ಮಠ-ಬೆಂಗಳೂರು

ಶ್ರೀ ಸರ್ಪಭೂಷಣ ಶಿವಯೋಗಿಗಳ ಮಠ-ಬೆಂಗಳೂರು
ಬೆಂಗಳೂರು ನಗರ ರೈಲು ನಿಲ್ದಾಣವಾಗಿ ಪರಿವರ್ತನೆಯಾಗಿ ಬಿಟ್ಟಿದೆ ಕೆರೆ. ತನ್ನ ಮೂಲ ಸ್ವರೂಪವನ್ನೇ ಸಂಪೂರ್ಣವಾಗಿ ಮರೆಮಾಚಿರುವ ಈ ಭಾಗವು ಹಿಂದೆ ಅಷ್ಟೇ ಸಮೃದ್ದವಾದ ಕರೆಯಾಗಿತ್ತು ಎಂದರೆ ಆಶ್ಚರ್ಯವಾಗುತ್ತದೆ ನಾಡದೊರೆಯಾಗಿದ್ದ ಹಿರಿಯ ಕೆಂಪೇಗೌಡರು ನಿರ್ಮಿಸಿದ ಈ ಕೆರೆಯನ್ನು “ಧರ್ಮಾಂಬುದಿ ಕೆರೆ” ಅಥವಾ “ದೊಡ್ಡಕೆರೆ” ಎಂದೇ ಕರೆಯಲಾಗುತ್ತದೆ. ಇಂತಹ ದೊಡ್ಡಕೆರೆಯ ಪೂರ್ವಭಾಗದ ಏರಿಯ ಹಿಂಬದಿಯಲ್ಲಿ ಶ್ರೀ ವಿರಕ್ತ ಮಠವು ಸ್ಥಾಪನೆಯಾಗಿತ್ತು. ಶ್ರೀ ಸಪ್ಪಣ್ಣಸ್ವಾಮಿ ಮಠ ಎಂದು
ಕರೆಯಲಾಗುತ್ತಿದ್ದ ಮಠವು ಇಂದು ಶ್ರೀ ಸರ್ಪಭೂಷಣ ಶಿವಯೋಗಿಗಳಮಠವಾಗಿ ಬೆಳೆದು ನಿಂತಿದೆ.

ಶ್ರೀ ನಿ.ಪ್ರ. ಮಲ್ಲಿಕಾರ್ಜುನ ದೇವರು ಮಹಾಸ್ವಾಮಿಗಳು
ರಟ್ಟಿಹಳ್ಳಿ, ಹಿರೇಕೇರೂರು ತಾ||
ಉತ್ತರಾಧಿಕಾರಿಗಳ ನೇಮಕ 21-12-1985.

ಶಿಕ್ಷಣ ಸಂಸ್ಥೆಗಳು
• ಉಚಿತ ವಿದ್ಯಾರ್ಥಿ ನಿಲಯಗಳು – ಶ್ರೀಮಠದಲ್ಲಿ, ಕೆ.ಜಿ.ಫ್.ನಲ್ಲಿ
• ಉಚಿತ ಮಹಿಳಾ ವಿದ್ಯಾರ್ಥಿ ನಿಲಯ – ಆರ್.ಪಿ.ಸಿ. ಲೇಔಟ್.

ವರ್ಷದ ಕಾರ್ಯಕ್ರಮಗಳು
• ಪ್ರತಿ ಅಮವಾಸೆಗೆ ವಿಶೇಷ ಪೂಜೆ “ಅರ್ಚನೆ, ಅರ್ಪಣ, ಅನುಭವ”
• ಶಿವರಾತ್ರಿಗೆ ಸಾಮೂಹಿಕ ಶಿವಪೂಜೆ
• ಯುಗಾದಿಯಲ್ಲಿ ಸರ್ಪಭೂಷಣ ಶಿವಯೋಗಿಗಳ ಜಯಂತಿ ಹಾಗೂ
• ಅಲ್ಲಮ ಪ್ರಭುಗಳ ಜಯಂತಿ, ಸಂಗೀತ, ಸಾಹಿತ್ಯ, ಅನುಭವ ಒಳಗೊಂಡ ವಿಶೇಷ ಕಾರ್ಯಕ್ರಮಗಳು (ಪಂಚಾಂಗ ಶ್ರವಣ)
• ಶ್ರಾವಣ ಮಾಸದಲ್ಲಿ ಪ್ರವಚನ
• ಬಸವ ಜಯಂತಿ ವಿಶೇಷ ಆಚರಣೆ
• ಆಗಸ್ಟ್ 15 (ಸ್ವಾತಂತ್ರ್ಯೋತ್ಸವ) ಆಚರಣೆ.

ವಿಳಾಸ
ದೂ: 080-22879777, 22356095
ಶ್ರೀ ನಿ.ಪ್ರ. ಮಲ್ಲಿಕಾರ್ಜುನ ದೇವರು ಮಹಾಸ್ವಾಮಿಗಳು
ಶ್ರೀ ಸರ್ಪಭೂಷಣ ಶಿವಯೋಗಿಗಳ ಮಠ ಟ್ರಸ್ಟ್(ರಿ.)
ಕೆಂಪೇಗೌಡ ವೃತ್ತ, ಮೆಜೆಸ್ಟಿಕ್,
ಬೆಂಗಳೂರು – 560 009.